ಕರ್ನಾಟಕ ಪೊಲೀಸ್ ನೇಮಕಾತಿ 2026: 8,176 ಕಾನ್‌ಸ್ಟೇಬಲ್ ಮತ್ತು ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಬೃಹತ್ ನೇಮಕಾತಿ

Karnataka Police Recruitment 2026

ಹಲೋ ಸ್ನೇಹಿತರೆ, ಮತ್ತೊಮ್ಮೆ Sathya-Jobalerts.com ಗೆ ಸ್ವಾಗತ

ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ನಮ್ಮ ವಿದ್ಯಾರ್ಥಿಗಳಿಗೆ ಒಂದು ಅತ್ಯಂತ ಸಿಹಿಸುದ್ದಿ ಮತ್ತು ಕರ್ನಾಟಕ ರಾಜ್ಯ ಪೊಲೀಸ್(KSP) ಇಲಾಖೆಯಿಂದ ಒಟ್ಟು 8,176 ಹುದ್ದೆಗಳ ಭರ್ತಿಗೆ ಹಸಿರು ನಿಶಾನೆ ಸಿಕ್ಕಿದೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಡಿಟೆಕ್ಟಿವ್ ಸಬ್ ಇನ್‌ಸ್ಪೆಕ್ಟರ್ (DSI), ನಾಗರಿಕ ಪೊಲೀಸ್ ಕಾನ್‌ಸ್ಟೇಬಲ್ (Civil), ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ (APC), ಕೆಎಸ್‌ಆರ್‌ಪಿ (KSRP), ಮತ್ತು ಕೆ,ಎಸ್‌,ಐ,ಎಸ್‌,ಎಫ್ (KSISF) ಹುದ್ದೆಗಳ ನೇರ ನೇಮಕಾತಿಗಾಗಿ ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ರವರ ಕಛೇರಿಯಿಂದ ಆದೇಶ ಹೊರಡಿಸಲಾಗಿದೆ. ದೀರ್ಘಕಾಲದಿಂದ ಕಾಯುತ್ತಿದ್ದ ನಿರುದ್ಯೋಗಿ ಯುವಕ-ಯುವತಿಯರಿಗೆ ಇದೊಂದು ಸುವರ್ಣ ಅವಕಾಶವಾಗಿದೆ, ಜೊತೆಗೆ ವಯೋಮಿತಿಯಲ್ಲೂ ಬರೋಬ್ಬರಿ 5 ವರ್ಷಗಳ ಶಾಶ್ವತ ಸಡಿಲಿಕೆ ನೀಡಲಾಗಿದೆ.

ಈ ನೇಮಕಾತಿಯ ಸಂಪೂರ್ಣ ವಿವರಗಳನ್ನು, ಅಂದರೆ — ಒಟ್ಟು ಹುದ್ದೆಗಳ ವಿಂಗಡಣೆ, ಮೀಸಲಾತಿ ನಿಯಮಗಳು, ವಯೋಮಿತಿ ಸಡಿಲಿಕೆ, ನನ್ನ ಸ್ವಂತ ಸಿದ್ಧತಾ ತಂತ್ರ, ಮತ್ತು ಪದೇ ಪದೇ ಕೇಳಲಾಗುವ 6 ಪ್ರಮುಖ ಪ್ರಶ್ನೆಗಳನ್ನು (FAQs) ಎಳೆಎಳೆಯಾಗಿ ವಿವರಿಸಲಿದ್ದೇನೆ. ಈ ಪೋಸ್ಟ್ ಅನ್ನು ಕೊನೆಯವರೆಗೂ ಓದಿ ಮತ್ತು ನಿಮ್ಮ ಸಿದ್ಧತೆಯನ್ನು ಇಂದೇ ಪ್ರಾರಂಭಿಸಿ.

Table of Contents

ವಿವರಣೆಸಂಪೂರ್ಣ ಮಾಹಿತಿ
ಇಲಾಖೆಯ ಹೆಸರುಕರ್ನಾಟಕ ರಾಜ್ಯ ಪೊಲೀಸ್ (KSP) ಇಲಾಖೆ
ಒಟ್ಟು ಹುದ್ದೆಗಳು8,176 ಹುದ್ದೆಗಳು
ಹುದ್ದೆಗಳ ಹೆಸರುಡಿಎಸ್‌ಐ, ಸಿವಿಲ್, ಎಪಿಸಿ, ಕೆಎಸ್‌ಆರ್‌ಪಿ ಮತ್ತು ಕೆಎಸ್‌ಐಎಸ್‌ಎಫ್ ಕಾನ್‌ಸ್ಟೇಬಲ್
ಆಯ್ಕೆ ವಿಧಾನಲಿಖಿತ ಪರೀಕ್ಷೆ, ದೇಹದಾಢ್ಯತೆ ಪರೀಕ್ಷೆ (ET/PST) ಮತ್ತು ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಕೆ ವಿಧಾನಆನ್‌ಲೈನ್ ಮೂಲಕ ಮಾತ್ರ
ಅಧಿಕೃತ ವೆಬ್‌ಸೈಟ್ksp.karnataka.gov.in
       

ಇಲಾಖೆಯಿಂದ ಮೇ 14, 2026 ರಂದು ಘಟಕಗಳಿಗೆ ವರ್ಗೀಕರಣ ವಿವರವನ್ನು ಕಳುಹಿಸಲು ಆದೇಶಿಸಲಾಗಿದೆ. ವಯೋಮಿತಿ ಮತ್ತು ಒಳಮೀಸಲಾತಿ ಅಂತಿಮಗೊಂಡಿರುವುದರಿಂದ, ಶೀಘ್ರದಲ್ಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದೆ.

ಪ್ರಮುಖ ಘಟನೆಗಳುನಿಗದಿತ ದಿನಾಂಕ ಮತ್ತು ಸಮಯ
ಇಲಾಖಾ ಆದೇಶ ಹೊರಡಿಸಿದ ದಿನಾಂಕ14-05-2026
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕಶೀಘ್ರದಲ್ಲೇ ಪ್ರಕಟಿಸಲಾಗುವುದು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಶೀಘ್ರದಲ್ಲೇ ಪ್ರಕಟಿಸಲಾಗುವುದು

(ನನ್ನಸಲಹೆ: ಅಧಿಸೂಚನೆ ಬಂದ ತಕ್ಷಣ ಅರ್ಜಿಸಲ್ಲಿಸಲು ನಿಮ್ಮಎಲ್ಲಾದಾಖಲೆಗಳನ್ನು(ಜಾತಿ ಪ್ರಮಾಣಪತ್ರ, ಹೈ-ಕ ಪ್ರಮಾಣ ಪತ್ರ) ಈಗಲೇ ಸಿದ್ಧವಾಗಿಟ್ಟುಕೊಳ್ಳಿ.)

ಪೊಲೀಸ್ ಇಲಾಖೆಯು ಒಟ್ಟು 8,176 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ (ಹೈ-ಕ) ಮತ್ತು ಕಲ್ಯಾಣ ಕರ್ನಾಟಕೇತರ (ನಾನ್-ಹೈ-ಕ) ಭಾಗಗಳಿಗೆ ಈ ಕೆಳಗಿನಂತೆ ಹಂಚಿಕೆ ಮಾಡಿದೆ:

ಕ್ರ.ಸಂಹುದ್ದೆಯ ಹೆಸರುಕಲ್ಯಾಣ ಕರ್ನಾಟಕಕಲ್ಯಾಣ ಕರ್ನಾಟಕೇತರಒಟ್ಟು ಹುದ್ದೆಗಳು
1ಡಿಟೆಕ್ಟಿವ್ ಸಬ್ ಇನ್‌ಸ್ಪೆಕ್ಟರ್ (ಡಿಎಸ್‌ಐ)051520
2ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ (ಎಪಿಸಿ)27513751650
3ನಾಗರಿಕ ಪೊಲೀಸ್ ಕಾನ್‌ಸ್ಟೇಬಲ್ (ಸಿವಿಲ್)61035004110
4ಸ್ಟೇಟ್ ರಿಸರ್ವ್ ಪೊಲೀಸ್ ಕಾನ್‌ಸ್ಟೇಬಲ್ (ಕೆಎಸ್‌ಆರ್‌ಪಿ)53215002032
5ಪೊಲೀಸ್ ಕಾನ್‌ಸ್ಟೇಬಲ್ (ಕೆಎಸ್‌ಐಎಸ್‌ಎಫ್)36400364
ಹುದ್ದೆಯ ಹೆಸರುಕನಿಷ್ಠ ಶೈಕ್ಷಣಿಕ ಅರ್ಹತೆ (ನಿರೀಕ್ಷಿತ)
ಡಿಟೆಕ್ಟಿವ್ ಸಬ್ ಇನ್‌ಸ್ಪೆಕ್ಟರ್ (DSI)ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು (Degree).
ಕಾನ್‌ಸ್ಟೇಬಲ್ (Civil/APC/KSRP/KSISF)ದ್ವಿತೀಯ ಪಿಯುಸಿ (PUC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು (JOC/ITI ಗಳಿಗೆ ಅಧಿಸೂಚನೆಯಲ್ಲಿ ಸ್ಪಷ್ಟನೆ ನೀಡಲಾಗುತ್ತದೆ).

ಬಹಳ ವರ್ಷಗಳಿಂದ ನೇಮಕಾತಿ ನಡೆಯದ ಕಾರಣ, ರಾಜ್ಯ ಸರ್ಕಾರವು ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಬರೋಬ್ಬರಿ 5 ವರ್ಷಗಳ ಶಾಶ್ವತ ಹೆಚ್ಚಳ ಮಾಡಿದೆ.

ಪ್ರವರ್ಗ / ವರ್ಗ (Category)ಹಳೆಯ ಗರಿಷ್ಠ ವಯೋಮಿತಿಹೊಸ ಗರಿಷ್ಠ ವಯೋಮಿತಿ (5 ವರ್ಷಗಳ ಹೆಚ್ಚಳ)
ಸಾಮಾನ್ಯ ವರ್ಗದವರಿಗೆ (GM)25 ವರ್ಷ30 ವರ್ಷ
SC / ST ಅಭ್ಯರ್ಥಿಗಳಿಗೆ27 ವರ್ಷ32 ವರ್ಷ
(ಸೂಚನೆ: ಅಧಿಕೃತ ಅಧಿಸೂಚನೆ ಪ್ರಕಟವಾದಾಗ ಕನಿಷ್ಠ ಮತ್ತು ಗರಿಷ್ಠ ವಯಸ್ಸನ್ನು ಲೆಕ್ಕಹಾಕುವ ನಿಖರ ದಿನಾಂಕವನ್ನು ನೀಡಲಾಗುತ್ತದೆ.)

ಈ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯ (SC) ಒಟ್ಟಾರೆ ಶೇಕಡಾ 15 ಮೀಸಲಾತಿಯಲ್ಲಿ ಹೊಸ ಒಳಮೀಸಲಾತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಆದೇಶಿಸಿದೆ.

  • ಪ್ರವರ್ಗ-ಎ: ಶೇ. 5.25
  • ಪ್ರವರ್ಗ-ಬಿ: ಶೇ. 5.25
  • ಪ್ರವರ್ಗ-ಸಿ: ಶೇ. 4.5 (ಪ್ರವರ್ಗ “ಸಿ” ಗೆ ಲಭ್ಯವಾಗುವ ಹುದ್ದೆಗಳಲ್ಲಿ ಶೇ. 20ರಷ್ಟು ಹುದ್ದೆಗಳನ್ನು 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಮೀಸಲಿರಿಸಲಾಗುವುದು.)

ಕರ್ನಾಟಕ ಪೊಲೀಸ್ ನೇಮಕಾತಿಯ ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ 3 ಹಂತಗಳನ್ನು ಒಳಗೊಂಡಿರುತ್ತದೆ:

  1. ಲಿಖಿತ ಪರೀಕ್ಷೆ (Written Exam): ಬಹುಆಯ್ಕೆ ಪ್ರಶ್ನೆಗಳನ್ನು (MCQs) ಒಳಗೊಂಡಿರುತ್ತದೆ.
  2. ದೇಹದಾಢ್ಯತೆ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆ (ET/PST): ಓಟ, ಎತ್ತರ ಜಿಗಿತ/ಉದ್ದ ಜಿಗಿತ, ಗುಂಡು ಎಸೆತ ಮತ್ತು ಎತ್ತರ/ಎದೆಯಳತೆ ಪರಿಶೀಲನೆ.
  3. ವೈದ್ಯಕೀಯ ಪರೀಕ್ಷೆ (Medical Exam): ದೃಷ್ಟಿ ದೋಷ, ವರ್ಣಾಂಧತೆ, ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ.
  • ಸ್ವ-ಹಸ್ತಾಕ್ಷರ ವಿರುವ ಪಾಸ್‌ಪೋರ್ಟ್ ಅಳತೆಯ ಫೋಟೋ ಮತ್ತು ಸಹಿ (ಅಪ್‌ಲೋಡ್ ಮಾಡಲು).
  • ಎಸ್‌ಎಸ್‌ಎಲ್‌ಸಿ (SSLC) ಮತ್ತು ಪಿಯುಸಿ (PUC) ಅಂಕಪಟ್ಟಿಗಳು.
  • ಡಿಎಸ್‌ಐ ಹುದ್ದೆಗೆ ಪದವಿ (Degree) ಅಂಕಪಟ್ಟಿಗಳು.
  • ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (OBC, SC, ST).
  • ಕಲ್ಯಾಣ ಕರ್ನಾಟಕ ಮೀಸಲಾತಿ ಕೋರುವವರು 371(J) ಪ್ರಮಾಣ ಪತ್ರ.
  • ಗ್ರಾಮೀಣ, ಕನ್ನಡ ಮಾಧ್ಯಮ, ಮತ್ತು ಯೋಜನಾ ನಿರಾಶ್ರಿತ ಪ್ರಮಾಣ ಪತ್ರಗಳು (ಅನ್ವಯಿಸಿದರೆ).

ಸ್ನೇಹಿತರೆ, 8 ಸಾವಿರಕ್ಕೂ ಹೆಚ್ಚು ಹುದ್ದೆಗಳಿರುವುದರಿಂದ ಸ್ಪರ್ಧೆ ತುಂಬಾ ಕಠಿಣವಾಗಿರುತ್ತದೆ.

  • ನನ್ನ ತಂತ್ರ: ಕೇವಲ ಪುಸ್ತಕ ಓದುವುದಷ್ಟೇ ಅಲ್ಲ, ಪ್ರತಿದಿನ ಬೆಳಿಗ್ಗೆ ಕನಿಷ್ಠ 1 ಗಂಟೆ ದೈಹಿಕ ಸಿದ್ಧತೆಗೆ (ಓಟ) ಮೀಸಲಿಡಿ. ಏಕೆಂದರೆ ಲಿಖಿತ ಪರೀಕ್ಷೆ ಪಾಸ್ ಮಾಡಿದರೂ ಗ್ರೌಂಡ್‌ನಲ್ಲಿ ಫೇಲ್ ಆಗುವವರ ಸಂಖ್ಯೆ ಹೆಚ್ಚು.
  • ಲಿಖಿತ ಪರೀಕ್ಷೆಗೆ: 6ನೇ ತರಗತಿಯಿಂದ 10ನೇ ತರಗತಿಯವರೆಗಿನ ರಾಜ್ಯ ಪಠ್ಯಕ್ರಮದ ಸಮಾಜ ವಿಜ್ಞಾನ ಮತ್ತು ವಿಜ್ಞಾನ ಪುಸ್ತಕಗಳನ್ನು ತಳಹದಿಯಾಗಿಟ್ಟುಕೊಳ್ಳಿ. ಮಾನಸಿಕ ಸಾಮರ್ಥ್ಯ (Mental Ability) ಪ್ರಶ್ನೆಗಳನ್ನು ಪ್ರತಿದಿನ ಬಿಡಿಸಿ.
  • ಕಳೆದ 5 ವರ್ಷಗಳ ಹಳೆಯ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿ, ಅವುಗಳ ವಿಶ್ಲೇಷಣೆ ಮಾಡಿ.
  • ಈಗಾಗಲೇ ಒಳಮೀಸಲಾತಿ ಅಳವಡಿಸದೇ ಹೊರಡಿಸಿರುವ ಎಲ್ಲಾ ಹಳೆಯ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು, ಹೊಸ ರೋಸ್ಟರ್ (400 ಬಿಂದುಗಳ) ಅನ್ವಯ ಪರಿಷ್ಕೃತ ಅಧಿಸೂಚನೆಗಳನ್ನು ಹೊರಡಿಸಲು ಸರ್ಕಾರ ಆದೇಶಿಸಿದೆ.
  • ಯಾವುದೇ ನೇಮಕಾತಿ ಅಧಿಸೂಚನೆಯಲ್ಲಿ 3 ಕ್ಕಿಂತ ಕಡಿಮೆ ಪರಿಶಿಷ್ಟ ಜಾತಿ ಬಿಂದುಗಳು ಲಭ್ಯವಿದ್ದಲ್ಲಿ, ಒಳಮೀಸಲಾತಿ ಬದಲು ಎಲ್ಲಾ 101 ಪರಿಶಿಷ್ಟ ಜಾತಿಗಳಿಗೆ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆ.
  • ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ತುಂಬುವಾಗ ತಮ್ಮ ಹೆಸರು, ಹುಟ್ಟಿದ ದಿನಾಂಕ, ಮತ್ತು ಮೀಸಲಾತಿ ವಿವರಗಳನ್ನು ಎಸ್ಎಸ್ಎಲ್ ಸಿ ಅಂಕಪಟ್ಟಿಯಂತೆ ನಿಖರವಾಗಿ ನಮೂದಿಸಬೇಕು.
  • ಹಂತ 1: ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ ksp.karnataka.gov.in ಗೆ ಭೇಟಿ ನೀಡಿ.
  • ಹಂತ 2: “Current Recruitments” ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಹಂತ 3: ಅಧಿಸೂಚನೆಯನ್ನು ತಪ್ಪದೇ ಓದಿ, “New Application” ಮೇಲೆ ಕ್ಲಿಕ್ ಮಾಡಿ.
  • ಹಂತ 4: ನಿಮ್ಮ ಶೈಕ್ಷಣಿಕ, ವಯಸ್ಸು ಮತ್ತು ಇತರೆ ವಿವರಗಳನ್ನು ಭರ್ತಿ ಮಾಡಿ.
  • ಹಂತ 5: ಕೇಳಲಾದ ಎಲ್ಲಾ ದಾಖಲೆಗಳನ್ನು ಸ್ಪಷ್ಟವಾಗಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
  • ಹಂತ 6: ಕೊನೆಯದಾಗಿ ಆನ್‌ಲೈನ್ ಮೂಲಕ ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿ, ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.
       
ಮಾಹಿತಿಯ ವಿವರಅಧಿಕೃತ ಲಿಂಕ್ (Official Link)
ಅಧಿಕೃತ ವೆಬ್‌ಸೈಟ್ (Official Website)ksp.karnataka.gov.in
Join TelegramClick here to join

ಪ್ರಶ್ನೆ 1: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಒಟ್ಟು ಎಷ್ಟು ಹುದ್ದೆಗಳನ್ನು ಕರೆಯಲಾಗಿದೆ?

ಉತ್ತರ: ಒಟ್ಟು 8,176 ಹುದ್ದೆಗಳನ್ನು ಕರೆಯಲಾಗಿದೆ. ಇದರಲ್ಲಿ ಸಿವಿಲ್ ಕಾನ್‌ಸ್ಟೇಬಲ್ (4110), ಎಪಿಸಿ (1650), ಕೆಎಸ್‌ಆರ್‌ಪಿ (2032), ಕೆಎಸ್‌ಐಎಸ್‌ಎಫ್ (364) ಮತ್ತು ಡಿಎಸ್‌ಐ (20) ಹುದ್ದೆಗಳೇ ಸೇರಿವೆ.

ಪ್ರಶ್ನೆ 2: ಸಿವಿಲ್ ಕಾನ್‌ಸ್ಟೇಬಲ್ ನೇಮಕಾತಿಗೆ ಗರಿಷ್ಠ ವಯೋಮಿತಿ ಎಷ್ಟಿದೆ?

ಪ್ರಶ್ನೆ 2: ಸಿವಿಲ್ ಕಾನ್‌ಸ್ಟೇಬಲ್ ನೇಮಕಾತಿಗೆ ಗರಿಷ್ಠ ವಯೋಮಿತಿ ಎಷ್ಟಿದೆ?
ಉತ್ತರ: ವಯೋಮಿತಿಯನ್ನು 5 ವರ್ಷ ಹೆಚ್ಚಿಸಲಾಗಿದೆ. ಸಾಮಾನ್ಯ ವರ್ಗದವರಿಗೆ 30 ವರ್ಷಗಳವರೆಗೆ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 32 ವರ್ಷಗಳವರೆಗೆ ಅವಕಾಶವಿದೆ.

ಪ್ರಶ್ನೆ 3: ನೇಮಕಾತಿಯಲ್ಲಿ ಒಳಮೀಸಲಾತಿ (Sub-Reservation) ಅನ್ವಯಿಸುತ್ತದೆಯೇ?

ಉತ್ತರ: ಹೌದು. ಪರಿಶಿಷ್ಟ ಜಾತಿಯ ಒಟ್ಟಾರೆ 15% ಮೀಸಲಾತಿಯನ್ನು ಪ್ರವರ್ಗ-ಎ (5.25%), ಪ್ರವರ್ಗ-ಬಿ (5.25%) ಮತ್ತು ಪ್ರವರ್ಗ-ಸಿ (4.5%) ಎಂದು ವಿಂಗಡಿಸಿ ಆದೇಶಿಸಲಾಗಿದೆ.

ಪ್ರಶ್ನೆ 4: ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಭಾಗಕ್ಕೆ ಎಷ್ಟು ಹುದ್ದೆಗಳಿವೆ?

ಉತ್ತರ: ಒಟ್ಟು 8,176 ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ (HK) ಭಾಗಕ್ಕೆ ಮೀಸಲಾದ ಹುದ್ದೆಗಳಿವೆ (ಉದಾಹರಣೆಗೆ ಸಿವಿಲ್-610, ಎಪಿಸಿ-275, ಇತ್ಯಾದಿ).

ಪ್ರಶ್ನೆ 5: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಉತ್ತರ: ಇಲಾಖೆಯು ಘಟಕಗಳಿಂದ ಹಂಚಿಕೆ ವಿವರಗಳನ್ನು ಕೇಳಿದ್ದು, ಶೀಘ್ರದಲ್ಲೇ ಅಧಿಕೃತ ಅಧಿಸೂಚನೆಯೊಂದಿಗೆ ಅರ್ಜಿ ಪ್ರಾರಂಭ ಮತ್ತು ಕೊನೆಯ ದಿನಾಂಕವನ್ನು ಪ್ರಕಟಿಸಲಾಗುತ್ತದೆ.

Sathya’s Final Suggestion

ಸ್ನೇಹಿತರೆ, 5 ವರ್ಷಗಳ ವಯೋಮಿತಿ ಸಡಿಲಿಕೆ ಸಿಕ್ಕಿರುವುದು ಲಕ್ಷಾಂತರ ಯುವಕರಿಗೆ ಮರುಜೀವ ನೀಡಿದಂತಾಗಿದೆ. ದಯವಿಟ್ಟು ನೋಟಿಫಿಕೇಶನ್ ಬರುವವರೆಗೂ ಕಾಯಬೇಡಿ. ಇಂದಿನಿಂದಲೇ ಗ್ರೌಂಡ್ ಪ್ರಾಕ್ಟೀಸ್ ಮತ್ತು ಓದುವುದನ್ನು ಶುರು ಮಾಡಿ. ಈ 8,176 ಪೋಸ್ಟ್‌ಗಳಲ್ಲಿ ಒಂದು ನಿಮ್ಮದಾಗಲಿ.

ಕರ್ನಾಟಕದ ಎಲ್ಲಾ ಹೊಸ ಸರ್ಕಾರಿ ಉದ್ಯೋಗಗಳು, ಅಡ್ಮಿಟ್ ಕಾರ್ಡ್‌ಗಳು ಮತ್ತು ಫಲಿತಾಂಶಗಳ ತ್ವರಿತ ಮಾಹಿತಿಗಾಗಿ ನಮ್ಮ Sathya-Jobalerts.com ಗೆ ಭೇಟಿ ನೀಡುತ್ತಿರಿ.

ನಿಮ್ಮ ಪರೀಕ್ಷೆಗೆ ಶುಭವಾಗಲಿ ಆಲ್ ದಿ ಬೆಸ್ಟ್

ಪೊಲೀಸ್ ಉದ್ಯೋಗದ ಈ ಸುವರ್ಣ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ, ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Also Check : Official CESCOM Apprentice Recruitment 2026 (200 Posts) : Apply Now : https://sathya-jobalerts.com/cescom-apprentice-recruitment-2026/

Leave a Comment